ಖನಿಜ ಸಂಸ್ಕರಣ ಅಧ್ಯಯನ ವಿಭಾಗ

ಯಾವುದೇ ರಾಷ್ಟ್ರದ ಆರ್ಥಿಕತೆಯು ಅದರ ನೈಸರ್ಗಿಕ ಸಂಪನ್ಮೂಲಗಳು ವಿಶೇಷವಾಗಿ ಭೂಮಿ, ನೀರು ಮತ್ತು ಖನಿಜ ಮತ್ತು ಅವುಗಳ ಬಳಕೆಯ ಮೇಲೆ ನಿಧ೵ರಿಸಲ್ಪಡುತ್ತದೆ. ನೀರು, ಅರಣ್ಯ ಮತ್ತು ಕೃಷಿ ಸಂಪನ್ಮೂಲಗಳು ನವೀಕರಿಸಬಹುದಾದ ಭಾಗವಾಗಿದ್ದು, ಖನಿಜ ಸಂಪನ್ಮೂಲಗಳು ನವೀಕರಿಸಲಾಗದ ಭಾಗಗಳಾಗಿವೆ ಮತ್ತು ಗಣಿಗಾರಿಕೆಯಿಂದ ಹಂತಹಂತವಾಗಿ ಉತ್ತಮ ಶ್ರೇಣಿಯ ಅದಿರು ಕಡಿಮೆಯಾಗುತ್ತಿದ್ದು, ಈ ಅಮೂಲ್ಯವಾದ, ನವೀಕರಿಸಲಾಗದ ಖನಿಜ ಸಂಪನ್ಮೂಲಗಳ ಯೋಜನೆ ಮತ್ತು ನ್ಯಾಯಯುತ ಬಳಕೆಯಲ್ಲಿ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗಿರುವುದು ಸನ್ನಿಹಿತವಾಗಿದೆ. ಭಾರತವು ಖನಿಜಗಳ ವೈವಿಧ್ಯತೆಯ ತಾಣವಾಗಿದೆ. ವಿಶೇಷವಾಗಿ ಕರ್ನಾಟಕ ರಾಜ್ಯವು ಉನ್ನತ ಶ್ರೇಣಿಯ ಕಬ್ಬಿಣದ ಅದಿರು ನಿಕ್ಷೇಪವನ್ನು ಪಡೆದುಕೊಂಡಿದೆ. ಈ ನೈಸರ್ಗಿಕ ಸಂಪನ್ಮೂಲಗಳದ ಖನಿಜ ಸಂಪತ್ತನ್ನು ಸರಿಯಾದ ಬಳಕೆಗೆ ಹೆಚ್ಚಿನ ಒತ್ತು ನೀಡಬೆಕಾಗಿದೆ.

ಉನ್ನತ ಶ್ರೇಣಿಗಳನ್ನೊಳಗೊಂಡ ಆಪಾರ ನಿಕ್ಷೇಪಗಳನ್ನು ಹೊಂದಿರುವ ಖನಿಜ ಸಂಪನ್ಮೂಲಗಳು ಜಾಗತಿಕವಾಗಿ ಕ್ಷೀಣಿಸಿವೆ ಮತ್ತು ಕಡಿಮೆ ದರ್ಜೆಯ, ಖನಿಜ ಸಂಸ್ಕರಿಸಲು ಕಷ್ಟಕರವಾದ ನಿಕ್ಷೇಪಗಳಾಗಿ ಪರಿವತಿ೵ತಗೊಂಡಿವೆ. ಕಡಿಮೆ-ದರ್ಜೆಯ ಅದಿರುಗಳನ್ನು ಸಂಸ್ಕರಿಸಲು ಸುಧಾರಿತ ತಂತ್ರಜ್ಞಾನಗಳು ಬಹುರಾಷ್ಟ್ರೀಯ ಕಂಪನಿಗಳಿಂದ ನಿರಂತರವಾಗಿ ಪರಿಶೋಧಿಸಲ್ಪಡುತ್ತಿವೆ.

ಮೇಲಿನ ಎಲ್ಲಾ ಮಾನದಂಡಗಳು ಮತ್ತು ಸೂಚಕಗಳು ಖನಿಜ ಸಂಸ್ಕರಣಾ ಕ್ಷೇತ್ರದಲ್ಲಿ ಯುವ ಮನಸ್ಸುಗಳಿಗೆ ಶಿಕ್ಷಣ ನೀಡುವ ಅಗತ್ಯವನ್ನು ಸೂಚಿಸುತ್ತವೆ. ಖನಿಜ ಸಂಸ್ಕರಣಾ ಅಧ್ಯಾಯನ ವಿಭಾಗ, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿ-ಸಂಡೊರಿನಲ್ಲಿ ಪ್ರಾರಂಭದಿಂದಲೂ ಸ್ಥಳೀಯ ಮತ್ತು ಜಾಗತಿಕ ಖನಿಜ ಕೈಗಾರಿಕೆಗಳ ಅಗತ್ಯತೆಗಳನ್ನು ಪೂರೈಸಲು ಮಾನವ ಸಂಪನ್ಮೊಲವನ್ನು ಅಭಿವೃದ್ಧಿಗೆ ಶ್ರಮಿಸುತ್ತಿದೆ ಇದು ಕರ್ನಾಟಕ ಪ್ರದೇಶದ ಮೊದಲ ಮತ್ತು ಏಕೈಕ ಹಳೆಯ ವಿಭಾಗವು ಹೌದು. ಖನಿಜ ಸಂಸ್ಕರಣೆಯನ್ನು ಅದಿರು ಸಂಸ್ಕರಣೆ, ಖನಿಜ ಸಂಸ್ಕರಣೆ ಮತ್ತು ಖನಿಜ ಸಂಸ್ಕರಣಾ ತಂತ್ರಜ್ಞಾನ ಎಂದೂ ಕರೆಯಲಾಗುತ್ತದೆ ಮತ್ತುಇದು ಒಂದು ಅನನ್ಯ ಮತ್ತು ಬಹುಶಿಸ್ತೀಯ ಸ್ನಾತಕೋತ್ತರ ಕಾರ್ಯಕ್ರಮವಾಗಿದೆ. ಖನಿಜ ಉದ್ಯಮದ ಬಹುತೇಕ ಸಮಸ್ಯೆಗಳನ್ನು ಪರಿಹರಿಸವಲ್ಲಿ ಈ ಕಾರ್ಯಕ್ರಮವು ಸಾಕಷ್ಟು ಸಾಮರ್ಥ್ಯವನ್ನು ಹೊಂದಿದೆ. ಎಂ.ಟೆಕ್ (ಖನಿಜ ಸಂಸ್ಕರಣೆ) ಎನ್ನುವುದು 3 ವರ್ಷದ (6 ಸೆಮಿಸ್ಟರ್) ಸ್ನಾತಕೋತ್ತರ ಕಾರ್ಯಕ್ರಮವಾಗಿದ್ದು, ದೇಶದ ಯುವ ಪ್ರತಿಭೆಗಳನ್ನು ಸದುಪಯೋಗಪಡಿಸಿಕೊಳ್ಳಲು ಎಂಜಿನಿಯರಿಂಗ್ ಮತ್ತು ಇತರ ಸಂಬಂಧಿತ ವಿಷಯಗಳೊಂದಿಗೆ ರಚಿಸಲಾಗಿದೆ. 15 ಹಾರ್ಡ್ ಕೋರ್ ವಿಷಯಗಳು, 10 ಸಾಫ್ಟ್ ಕೋರ್ ವಿಷಯಗಳು ಮತ್ತು 15 ಹಾರ್ಡ್ ಕೋರ್ ಪ್ರಯೋಗಿಕ ವಿಷಯಗಳನ್ನು ಕಲಿಸಲಾಗುತ್ತದೆ. 6 ನೇ ಸೆಮಿಸ್ಟರ್ (III ನೇ ವರ್ಷದಲ್ಲಿ) ಕೈಗಾರಿಕಾ ಸಂಬಂಧಿತ ಅನ್ವಯಿಕೆಗಳ ಯೋಜನಾ ಕಾರ್ಯಗಳಿಗೆ ಮತ್ತು ವಿದ್ಯಾರ್ಥಿಗಳಿಂದ ಕೈಗೊಳ್ಳಬೇಕಾದ ಮೂಲಭೂತ ಅಧ್ಯಯನಗಳಿಗೆ ಸಮರ್ಪಿಸಲಾಗಿದೆ (ಯೋಜನೆಯ ಕೆಲಸದ ಅವಧಿ 4 ತಿಂಗಳುಗಳು). ಪಠ್ಯಕ್ರಮವು ಖನಿಜ ಉದ್ಯಮದ ಅಗತ್ಯತೆಗಳೊಂದಿಗೆ ಕ್ರಮಬದ್ಧವಾಗಿ ರಚಿತಗೊಂಡಿದೆ. ಖನಿಜ ಉದ್ಯಮದಲ್ಲಿನ ಇಂದಿನ ಬೆಳವಣಿಗೆಗಳ ಬಗೆಗಿನ ವಿಷಯಗಳು ಮತ್ತು ಅದರ ಕೈಗಾರಿಕಾ ಅನ್ವಯಿಕೆಗಳನ್ನು ನಿರಂತರವಾಗಿ ವಿದ್ಯಾಥಿ೵ಗಳಲ್ಲಿ ರವಾನಿಸಲಾಗುತ್ತದೆ.

ಅಧ್ಯಾಪಕ ವರ್ಗ
ಕಾರ್ಯಕ್ರಮಗಳು
ಸಂಶೋಧನಾ ಯೋಜನೆ ವಿವರಗಳು
ಸಂಶೋಧನಾ ವಿದ್ಯಾರ್ಥಿ ವಿವರಗಳು
ಟೈಮ್ ಟೇಬಲ್


ಡಾ ಶರತ್ ಕುಮಾರ್
ಅಧ್ಯಕ್ಷರು

ಖನಿಜ ಸಂಸ್ಕರಣೆ ಇಲಾಖೆ
ಜ್ಞಾನ ಸಗರ ಆವರಣ
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ
ಬಳ್ಳಾರಿ- 583105

: Mtech@vskub.ac.in