ಡಾ.ಬಾಬು ಜಗಜೀವನರಾಂ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ

ಪ್ರಸ್ತಾವನೆ

ಡಾ. ಬಾಬು ಜಗಜೀವನರಾಂ ಅವರು ನಮ್ಮ ದೇಶದ ಅಪ್ರತಿಮ ರಾಜಕೀಯ ನಾಯಕರು. ಅವರನ್ನು ಭಾರತೀಯರು ಗೌರವಯುತವಾಗಿ “ಬಾಬೂಜಿ” ಎಂದು ಕರೆಯುತ್ತಾರೆ. ಭಾರತದ ರಾಜಕೀಯ ಇತಿಹಾಸದಲ್ಲಿ ಅವರ ಹೆಸರನ್ನು ಸುವರ್ಣ ಅಕ್ಷರಗಳಲ್ಲಿ ಬರದಿಡಬೇಕಾಗಿದೆ. ಏಕೆಂದರೆ ದೇಶದ ಪ್ರಗತಿಯಲ್ಲಿ ಅವರ ಅಪ್ರತಿಮ ಕೊಡುಗೆ ಇದೆ. ಇಂದು ಅವರ ಚಿಂತನೆ ಮತ್ತು ಕೊಡುಗೆಗಳ ಕುರಿತು ಅಳವಾಗಿ ಅಧ್ಯಯನ ಮಾಡಬೇಕಾದ ಮತ್ತು ಅವುಗಳನ್ನು ಜನ ಸಾಮಾನ್ಯರಿಗೆ ಪರಿಚಯಿಸಬೇಕಾದ ತುರ್ತು ಅವಶ್ಯಕತೆ ಇದೆ. ಇದೇ ಸದಾಶಯದೊಂದಿಗೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಡಾ. ಬಾಬು ಜಗಜೀವನರಾಂ ಸಂಶೋಧನಾ ಮತ್ತು ಅಧ್ಯಯನ ಕೇಂದ್ರವನ್ನು ಘನ ಕರ್ನಾಟಕ ಸರ್ಕಾರದ ಆರ್ಥಿಕ ನೆರವಿನೊಂದಿಗೆ ದಿನಾಂಕ ೫/೪/೨೦೧೬ ರಂದು ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಆರಂಭಿಸಿದೆ. ಜನಸಾಮಾನ್ಯರಿಗೆ ಉನ್ನತ ಶಿಕ್ಷಣವನ್ನು ನೀಡುವ ಬಹು ದೊಡ್ಡ ಜವಾಬ್ದಾರಿಯನ್ನು ಹೊತ್ತಿರುವ ವಿ.ವಿ.ಯು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಅವಿಷ್ಕಾರಗಳನ್ನು ಮಾಡಿದೆ. ಅಲ್ಲದೇ ರಾಜ್ಯದಲ್ಲಿಯೇ ‘ಙouಟಿgesಣ’ ವಿ.ವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

 

ದೇಶದ ಅಭಿವೃದ್ದಿಯಲ್ಲಿ ಡಾ. ಬಾಬೂಜಿಯವರ ಪಾತ್ರ ಅಪಾರವಾದದು. ಡಾ. ಬಾಬು ಜಗಜೀವನ ರಾಂ ಸಂಶೋಧನಾ ಮತ್ತು ಅಧ್ಯಯನ ಕೇಂದ್ರವು ಡಾ. ಬಾಬೂಜಿಯವರ ಚಿಂತನೆ, ಜೀವನ, ರಾಜಕೀಯ, ದೇಶದ ಅಭಿವೃದ್ಧಿಗಾಗಿ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತು ವ್ಯವಸ್ಥಿತ ಅಧ್ಯಯನ ಮತ್ತು ಸಂಶೋಧನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಆ ಮೂಲಕ ಅವರ ಚಿಂತನೆಗಳನ್ನು ಪ್ರಾಯೋಗಿಕವಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರಿಗೆ ತಲುಪಿಸುವಲ್ಲಿ ನಮ್ಮ ಕೇಂದ್ರವು ಬಹು ಮುಖ್ಯ ಪಾತ್ರವಹಿಸಿದೆ. ಸಮಾಜದಂಚಿನಲ್ಲಿ ಜೀವಿಸುವ ಗ್ರಾಮೀಣ ಹಿಂದುಳಿದ ವರ್ಗಗಳ/ಪ.ಜಾ/ಪ.ಪಂ, ಬಡವರನ್ನು, ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಡಾ. ಬಾಬೂಜಿಯವರ ಚಿಂತನೆಗಳು ಇಂದು ಅತ್ಯಂತ ಪ್ರಸ್ತುತವಾಗಿದ್ದು, ಅವರ ಚಿಂತನಾ ಕ್ರಮಗಳನ್ನು ದೇಶದ ಅಭಿವೃದ್ಧಿಯಲ್ಲಿ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ.

 

ಜನಸಾಮಾನ್ಯರ ಸಬಲೀಕರಣಕ್ಕಾಗಿ ದುಡಿಯಲು ಕಂಕಣ ಬದ್ಧರಾಗಿರುವ ನಮ್ಮ ಕೇಂದ್ರವು ಕರ್ನಾಟಕ ಸರ್ಕಾರ ಮತ್ತು ಇತರೆ ಸಹಬಾಗಿತ್ವದಾರರ ಸಹಕಾರದೊಂದಿಗೆ ಈ ಕಾರ್ಯವನ್ನು ಅನುಷ್ಠಾನಗೊಳಿಸಲು ಇಚ್ಛಿಸಿದೆ. ಪ್ರಸ್ತುತ ಈ ಕೇಂದ್ರದ ಸಂಯೋಜಕರಾಗಿ ಡಾ.ಎಚ್.ತಿಪ್ಪೇಸ್ವಾಮಿಯವರು ಕಾರ್ಯನಿರ್ವಹಿಸುತ್ತಿದ್ದಾರೆ.

ದ್ಯೇಯ :

೧.ಡಾ. ಬಾಬು ಜಗಜೀವನರಾಂ ಅವರ ಚಿಂತನೆಗಳ ಕುರಿತ ಸಂಶೋಧನೆಗಳಿಗೆ ಉತ್ತೇಜನ ನೀಡುವುದು.

೨. ಬಲಹೀನ ವರ್ಗಗಳ ಅಭಿವೃದ್ಧಿ ಮತ್ತು ಅವರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡುವುದು.

ದೃಷ್ಠಿ :

೧.ಸಮಕಾಲೀನ ಸಮಸ್ಯೆಗಳಿಗೆ ಡಾ. ಬಾಬುಜಗಜೀವನ ರಾಂ ಅವರ ತತ್ವ/ಸಿದ್ಧಾಂತ ಕೊಡುಗೆಗಳು ಸಾಮಾಜಿಕ ಒಳಗೊಳ್ಳುವಿಕೆಗೆ ಹೇಗೆ ಪ್ರಾಯೋಗಿಕವಾಗಿ ಸಹಕಾರಿಯಾಗಿವೆ ಎಂಬುದನ್ನು ಗುರುತಿಸಿ ಅನುಷ್ಠಾನಗೊಳಿಸುವುದು.

ಕೇಂದ್ರದ ಉದ್ದೇಶಗಳು:

೧.ಸಮಕಾಲೀನ ಸಮಾಜಕ್ಕೆ ಡಾ. ಬಾಬು ಜಗಜೀವನ ರಾಂ ಅವರ ಚಿಂತನೆಗಳು ಹೇಗೆ ಪ್ರಸ್ತುತವಾಗಿವೆ ಎನ್ನುವುದನ್ನು ಸಂಶೋಧನೆ/ ಅಧ್ಯಯನ ಮಾಡುವುದು.

೨.ಡಾ. ಬಾಬೂಜಿಯವರ ಚಿಂತನೆಗಳು ದೇಶದ ಸಾಮಾಜಿಕ, ರಾಜಕೀಯ, ಆರ್ಥಿಕ ಕ್ಷೇತ್ರದಲ್ಲಿ ಉಂಟುಮಾಡಿದ ಪರಿಣಾಮಗಳ ಕುರಿತು ಅಧ್ಯಯನ ಮಾಡುವುದು.

೩.ದೇಶದ ಸಮಾಜೋ-ಆರ್ಥಿಕ ಬದಲಾವಣೆಗೆ ಡಾ. ಬಾಬೂಜಿ ಚಿಂತನೆಗಳು ಹೇಗೆ ಕಾರಣವಾಗಿವೆ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು.

೪.ಡಾ.ಬಾಬೂಜಿಯವರ ತತ್ವಾದರ್ಶ-ಸಿದ್ಧಾಂತ, ಚಿಂತನೆಗಳ ಪ್ರಸ್ತುತತೆಯನ್ನು ಆಧುನಿಕ ಗ್ರಾಮೀಣ ಸಮಾಜಕ್ಕೆ ತಲುಪಿಸಲು ವಿಸ್ತರಣಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.

೫.ಡಾ. ಬಾಬೂಜಿಯವರ ಚಿಂತನೆಗಳ ಹಿನ್ನಲೆಯಲ್ಲಿ ವಿವಿಧ ಕೋರ್ಸ್ಗಳನ್ನು ತೆರೆದು ಅಧ್ಯಯನಕ್ಕೆ ಅವಕಾಶ ಕಲ್ಪಿಸಿಕೊಡುವುದು. (U.ಉ/P.ಉ/ P.ಉ.ಆiಠಿಟomಚಿ/ಒ.Phiಟ/Ph.ಆ)

೬.ಡಾ. ಬಾಬೂಜಿಯವರ ಬರಹ ಭಾಷಣಗಳ ಹಿನ್ನಲೆಯಲ್ಲಿ ಕಾರ್ಯಗಾರ/ವಿಚಾರಗೋಷ್ಠಿ/ವಿಚಾರಸಂಕೀರ್ಣ/ಸಮ್ಮೇಳನಗಳನ್ನು ಹಮ್ಮಿಕೊಳ್ಳುವುದು.

೭.ವಿವಿಧ ಸಂಶೋಧನಾ ಯೋಜನೆಗಳನ್ನು(ಂಛಿಣioಟಿ ಖeseಚಿಡಿಛಿh) ಹಮ್ಮಿಕೊಂಡು ನಿರ್ಗತಿಕರ ಸರ್ವಾಂಗೀಣಾ ಅಭಿವೃದ್ಧಿಗಾಗಿ ಶ್ರಮಿಸುವುದು.

೮.ಡಾ. ಬಾಬೂಜಿಯವರ ಹೆಸರಿನಲ್ಲಿ ಅವರ ಜೀವನ ಸಾಧನೆಗಳನ್ನು ಪ್ರತಿಬಿಂಬಿಸುವ ವಸ್ತು ಸಂಗ್ರಾಹಾಲಯ ಮತ್ತು ಪ್ರದರ್ಶನ ಕೇಂದ್ರಗಳನ್ನು ಸ್ಥಾಪಿಸುವುದು.

೯.ಗ್ರಾಮೀಣಾ ಮತ್ತು ನಗರ ಪ್ರದೇಶಗಳ ನಿರುದ್ಯೋಗಿ ಯುವಕರಿಗೆ ವಿವಿಧ ಜೀವನ ಪ್ರಯುಕ್ತ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

೧೦. ಗ್ರಾಮೀಣಾ ಭಾಗದ ಜನರಲ್ಲಿ ರೂಢಿಗತವಾಗಿರುವ ಕೆಲ ಸಾಮಾಜಿಕ ಅನಿಷ್ಟ ಪದ್ಧತಿಗಳ ನಿರ್ಮೂಲನೆಗಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

೧೧. ಡಾ. ಬಾಬೂಜಿಯವರ ಜೀವನ ಸಾಧನೆಗಳ ಮಾಹಿತಿ ಇರುವ ಕೀಯೋನಿಕ್ಸ್ ಯಂತ್ರಗಳ ಸ್ಥಾಪನೆ ಮತ್ತು ಅತ್ಯಾಧುನಿಕ ಗ್ರಂಥಾಲಯ ಸ್ಥಾಪಿಸುವುದು

೧೨.ಭಾರತದ ಸಾಮಾಜಿಕ-ರಾಜಕೀಯ ಕ್ಷೇತ್ರದ ಪುನರ್ ರಚನೆಯಲ್ಲಿ ಡಾ. ಬಾಬೂಜಿಯವರ ಪಾತ್ರವನ್ನು ಗುರುತಿಸಿ ಅವುಗಳನ್ನು ಅನುಷ್ಠಾನಗೊಳಿಸುವುದು.

ನಮ್ಮ ಚಟುವಟಿಕೆಗಳು:

೧.ಎಸ್.ಸಿ/ಎಸ್.ಟಿ ಸಂಶೋಧನಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ೧೦ ದಿನಗಳ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.

೨. ಡಾ.ಬಾಬು ಜಗಜೀವನ ರಾಂ ಅವರ ಚಿಂತನೆಗಳ ಕುರಿತ ಎರಡು ದಿನಗಳ ರಾಷ್ಟಿçÃಯ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.

೩. ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಡಾ.ಬಾಬು ಜಗಜೀವನ ರಾಂ ಅವರ ಕುರಿತ ಛಾಯಚಿತ್ರಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ.

೪. ನಿರಂತರವಾಗಿ ಇದುವರೆಗೆ ಡಾ.ಬಾಬು ಜಗಜೀವನ ರಾಂ ಅವರ ಜನ್ಮ ದಿನಾಚರಣೆ ಮತ್ತು ಪುಣ್ಯಸ್ಮರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

೫. ಪ್ರಚಾರೋಪನ್ಯಾಸ ಮಾಲೆಯನ್ನು ಆಯೋಜಿಸಲಾಗಿದೆ.

ಕೇಂದ್ರದ ಮುಂದಿನ ಯೋಜನೆಗಳು:

ಸಾಮಾಜಿಕ ಸಮಸ್ಯೆಗಳು, ಜಾತ್ಯಾತೀತತೆ, ಸಾಮಾಜಿಕ ಶಾಂತಿ, ಕೃಷಿ, ಉತ್ಪಾದನೆ, ರಕ್ಷಣಾ ವ್ಯವಸ್ಥೆ, ಕಾರ್ಮಿಕ ಕಲ್ಯಾಣ, ಮಹಿಳಾ ಸಬಲೀಕರಣ ವಿಷಯಗಳಿಗೆ ಸಂಬAಧಿಸಿದAತೆ ಡಾ. ಬಾಬೂಜಿಯವರ ಹೆಸರಿನಲ್ಲಿ ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು.


ಡಾ. ತಿಪ್ಪೇಸ್ವಾಮಿ ಎಚ್
ಕಾರ್ಯಕ್ರಮ ಸಂಯೋಜನಾಧಿಕಾರಿಗಳು

ಡಾ. ಬಾಬುಜಗಜೀವನ ರಾಂ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ
ಬಳ್ಳಾರಿ- 583105

:9448576879

  :drbabuji@vskub