ಜೈವಿಕ ರಸಾಯನಶಾಸ್ತ್ರ/ಜೈವಿಕ ತಂತ್ರಜ್ಞಾನ ವಿಭಾಗ

ವಿಜಯನಗರ ಶ್ರೀಕೃಷ್ಣದೇವರಾಯವಿಶ್ವವಿದ್ಯಾಲಯ, ಬಳ್ಳಾರಿಯಲ್ಲಿ ಎಂ.ಎಸ್ಸಿ ಜೈವಿಕ ತಂತ್ರಜ್ಞಾನ ಅಧ್ಯಯನ ಹಾಗೂ ಸಂಶೋಧನಾ ವಿಭಾಗವನ್ನು 2019-20ರ ಶೈಕ್ಷಣಿಕ ಸಾಲಿನಲ್ಲಿ ಆರಂಭಿಸಲಾಯಿತು. ಸದರಿ ವಿಭಾಗವು ಅನ್ವಯಿಕ ವಿಜ್ಞಾನ ಸ್ನಾತಕೋತ್ತರ ಪದವಿ ಹಾಗೂ ಪಿ.ಹೆಚ್.ಡಿ ಸಂಶೋಧನಾ ವ್ಯಾಸಾಂಗವನ್ನು ಹೊಂದಿದೆ. ಜೈವಿಕ ತಂತ್ರಜ್ಞಾನ ವಿಭಾಗದ ಪಠ್ಯಕ್ರಮವು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿನ ಆಧುನಿಕ ಅವಿಷ್ಕಾರಗಳಾದ ಮೌಲ್ಯವರ್ಧಿತ ಉತ್ಪನ್ನಗಳ ಅಭಿವೃದ್ಧಿ,ಅನುವಂಶಿತ ಚಿಕಿತ್ಸೆ,ತಂತ್ರಜ್ಞಾನ, ಪ್ರಾಣಿ ಅಂಗಾಂಶ ತಂತ್ರಜ್ಞಾನ, ಕೋಶ ತಂತ್ರಜ್ಞಾನ,ಔಷಧ ವೈದ್ಯಶಾಸ್ತ್ರ ವಿಷಯಗಳ ಅನ್ವಯಿಕ ಜ್ಞಾನ ಆಧಾರಿತವಾಗಿದೆ. ಜೈವಿಕ ತಂತ್ರಜ್ಞಾನ ಪದವೀಧರರಿಗೆ ಜೀವಶಾಸ್ತ್ರ, ರಸಾಯನಶಾಸ್ತ್ರ, ಔಷಧ ವೈದ್ಯಶಾಸ್ತ್ರ ಮುಂತಾದ ಅಂತರ್ ಶಿಸ್ತೀಯ ಕ್ಷೇತ್ರಗಳಲ್ಲಿ ರಾಷ್ಟ್ರ ಮಟ್ಟದ/ಅಂತರ್ ರಾಷ್ಟ್ರೀಯ ಮಟ್ಟದ ಸಂಶೋಧನಾ ಕೇಂದ್ರಗಳಲ್ಲಿ ಸಂಶೋಧನಾ ಚಟುವಟಿಕೆಗಳಲ್ಲಿ ಭಾಗವಹಿಸಬಹುದಾಗಿದೆ.

ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಆಧುನಿಕ ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಎಂ.ಎಸ್ಸಿ ಜೈವಿಕ ತಂತ್ರಜ್ಞಾನ ಪದವೀಧರರಿಗೆ ತಂತ್ರಜ್ಞಾನ ಕಂಪನಿಗಳಲ್ಲಿ, ಉತ್ಪನ್ನಗಳ ಶುದ್ಧೀಕರಣ ಘಟಕಗಳಲ್ಲಿ ಗುಣಮಟ್ಟ ನಿರ್ಧಾರಣೆ, ಔಷಧೀಯ ವಿಜ್ಞಾನ ಕ್ಷೇತ್ರಗಳಲ್ಲಿ ರೋಗನಿರ್ಣಯ, ಆಧುನಿಕ ಕೃಷಿ ಸಂಶೋಧನಾ ಕ್ಷೇತ್ರಗಳಲ್ಲಿ ಹಾಗೂ ವಿವಿಧ ರೀತಿಯ ಕೋಶ ಕೇಂದ್ರಗಳಲ್ಲಿ ವಿಫುಲ ಉದ್ಯೋಗಾವಕಾಶಗಳಿವೆ.

*ಕಳೆದ ಎರಡು ವರ್ಷಗಳಲ್ಲಿ ಇಡೀ ವಿಶ್ವವನ್ನು ಭಾಧಿಸಿದ ಮಾರಕ ಕೊರೋನಾ ವೈರಸ್ ರೋಗ ನಿರ್ವಹಣಾ ಹಾಗೂ ನಿಯಂತ್ರಣ ಕಾರ್ಯಕ್ರಮದಲ್ಲಿ ವಿಭಾಗದ ವಿದ್ಯಾರ್ಥಿಗಳು ವೈದ್ಯಕೀಯ
ಮಹಾವಿದ್ಯಾಲಯ,ಕೊಪ್ಪಳಗಳ ಪ್ರಯೋಗಾಲಯಗಳಲ್ಲಿ ಸೇವಕರಾಗಿ/ಪ್ರಯೋಗಾಲಯ ಸಹಾಯಕರಾಗಿ ಸಲ್ಲಿಸಿರುತ್ತಾರೆ.

ಅಧ್ಯಾಪಕ ವರ್ಗ
ಕಾರ್ಯಕ್ರಮಗಳು
ಸಂಶೋಧನಾ ಯೋಜನೆ ವಿವರಗಳು
ಸಂಶೋಧನಾ ವಿದ್ಯಾರ್ಥಿ ವಿವರಗಳು
ಟೈಮ್ ಟೇಬಲ್


ಡಾ.ಕೆ.ಎಚ್. ಶಿವಪ್ರಸಾದ್
ಅಧ್ಯಕ್ಷರು

ಜೈವಿಕ ರಸಾಯನಶಾಸ್ತ್ರ/ಜೈವಿಕ ತಂತ್ರಜ್ಞಾನ ವಿಭಾಗ
ಜ್ಞಾನ ಸಗರ ಆವರಣ
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ
ಬಳ್ಳಾರಿ- 583105

: